ಬಿಸ್ಮತ್
ಪರಮಾಣು ಸಂಖ್ಯೆ 83, ಪರಮಾಣು ತೂಕ 208.98 ಇರುವ ಲೋಹಧಾತು, ರಾಸಾಯನಿಕ ಪ್ರತೀಕ ದ್ರವನಬಿಂದು 271 ಡಿ.ಸೇ. ಕುದಿಬಿಂದು 1630 ಡಿ.ಸೇ. ಸಾಂದ್ರತೆ 9.8 ಗ್ರಾಮ್/ಸೆಂಮೀ. ಬೂದಿ ಬಿಳೆ ಬಣ್ಣದ ಕಠಿನ ಬಿಧುರ ಮತ್ತು ಸ್ಫಟಿಕಾತ್ಮಕ ಲೋಹ. ಘನೀಭವಿಸುವಾಗ ವ್ಯಾಕೋಚಿಸುವ ಕೆಲವೇ ಲೋಹಗಳ ಪೈಕಿ ಒಂದು. ವ್ಯಾಕೋಚನ ಪ್ರಮಾಣ 3.3%. ಪಾದರಸದ ಹೊರತಾಗಿ ಇತರ ಲೋಹಗಳ ಪೈಕಿ ಬಿಸ್ಮತ್ತಿನ ಶಾಖವಾಹಕತೆ ನಿಮ್ನತಮ. ಅತ್ಯಧಿಕ ಪ್ರತಿಕಾಂತೀಯ (ಡಯಾಮ್ಯಾಗ್ನೆಟಿಕ್) ಲೋಹ. ಕೊಠಡಿ ಉಷúತೆಯ ಶುಷ್ಕ ವಾಯುವಿನಲ್ಲಿ ಬಿಸ್ಮತ್ ಜಡವಾಗಿರುತ್ತದೆ. ಆದ್ರ್ರವಾಯುವಿನಲ್ಲಿ ಕೊಂಚ ಉತ್ಕರ್ಷಣೆಗೆ ಈಡಾಗುತ್ತದೆ. 

ಜಿ.ಎಚ್.ಪೋಟ್ ಎಂಬ ವಿಜ್ಞಾನಿ ಇದರ ಕೆಲವು ಗುಣಧರ್ಮಗಳನ್ನು ಮೊದಲಿಗೆ 1737ರಲ್ಲಿ ತೋರಿಸಿ ಕೊಟ್ಟ. ಮುಂದೆ 1753ರಲ್ಲಿ ಜಾಫರ್ ಮತ್ತು 1780ರಲ್ಲಿ ಬರ್ಲ್‍ಮನ್ ಎಂಬ ವಿಜ್ಞಾನಿಗಳು ಇದರ ಎಲ್ಲ ರಾಸಾಯನಿಕ ಗುಣಧರ್ಮಗಳನ್ನು ವಿಶದೀಕರಿಸಿದರು. ಮೂಲವಸ್ತುವಾಗಿ ಅತ್ಯಲ್ಪ ಪ್ರಮಾಣದಲ್ಲಿ ದೊರೆಯುತ್ತದೆ. ಸಂಯುಕ್ತ ರೂಪದಲ್ಲಿ ಬಿಸ್ಮತ್ ಗ್ಲಾನ್ಸ್ (ಃIS), ಬಿಸ್ಮತ್ ಪೊಖ್ರ (ಃIಔ) ಬಿಸ್ಮತ್ತೈಟ್ (ಃIಅಔ3) ಮುಂತಾದವುಗಳಲ್ಲಿ ದೊರೆಯುತ್ತದೆ. ಖನಿಜಗಳು ಕೊರಿಯ, ಚೀನ, ಬೊಲಿವೀಯ, ಆರ್ಜೈಂಟೈನ, ಆಫ್ರಿಕ, ಉಗಾಂಡ ಮುಂತಾದ ಕಡೆಗಳಲ್ಲಿ ಇವೆ. ಔಷಧಿ, ಅಂಗರಾಗ ಮತ್ತು ಪರಮಾಣು ರಿಯಾಕ್ಟರ್ ಮುಂತಾದೆಡೆ ಬಿಸ್ಮತ್ತಿನ ಉಪಯೋಗ ಉಂಟು. 						 			
(ಎಲ್.ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ